ಬ್ಯಾಂಕ್ ಆಫ್ ಬರೋಡಾ ವಿವಿಧ ವಿಭಾಗಗಳ 206 ಮ್ಯಾನೇಜರ್ ಮತ್ತು ಆಫೀಸರ್ ಹುದ್ದೆಗಳ ನೇಮಕಾತಿಗೆ ಆನ್‌ಲೈನ್ ಅರ್ಜಿ ಆಹ್ವಾನಿಸಿದೆ. 1.20 ಲಕ್ಷ ರೂ.ವರೆಗೆ ವೇತನವಿದ್ದು, ಸಂಪೂರ್ಣ ಮಾಹಿತಿ ಇಲ್ಲಿದೆ.
ಬ್ಯಾಂಕಿಂಗ್ ವಲಯದಲ್ಲಿ ಉದ್ಯೋಗ ಗಿಟ್ಟಿಸಿಕೊಳ್ಳುವ ಕನಸು ಕಾಣುತ್ತಿರುವ ಯುವಜನತೆಗೆ ಇಲ್ಲಿದೆ ಭರ್ಜರಿ ಅವಕಾಶ. ದೇಶದ ಪ್ರಮುಖ ಹಾಗೂ ಅತಿದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್‌ಗಳಲ್ಲಿ ಒಂದಾಗಿರುವ ಬ್ಯಾಂಕ್ ಆಫ್ ಬರೋಡಾ ನೇಮಕಾತಿ ಪ್ರಕ್ರಿಯೆಗೆ ಚಾಲನೆ ನೀಡಿದೆ. ಒಟ್ಟು 206 ವಿವಿಧ ಮ್ಯಾನೇಜರ್ ಹಾಗೂ ಆಫೀಸರ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಈ ಬೃಹತ್ ನೇಮಕಾತಿಯಡಿ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ತಿಂಗಳಿಗೆ ಗರಿಷ್ಠ 1,20,000 ರೂಪಾಯಿವರೆಗೆ ಅತ್ಯುತ್ತಮ ವೇತನ ಸಿಗಲಿದೆ. 2026ರ ಆಗಸ್ಟ್ 06ರಿಂದಲೇ ಆನ್‌ಲೈನ್ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದೆ. ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳುಆಗಸ್ಟ್ 26ರೊಳಗೆ ತಮ್ಮ ಅರ್ಜಿಗಳನ್ನು ಸಲ್ಲಿಸಬೇಕಿದ್ದು, ಕೊನೆಯ ದಿನಾಂಕದವರೆಗೆ ಕಾಯದೆ ಆದಷ್ಟು ಬೇಗ ಪ್ರಕ್ರಿಯೆ ಪೂರ್ಣಗೊಳಿಸುವುದು ಜಾಣ್ಮ.
ಯಾವುದೇ ಪದವಿ, ಇಂಜಿನಿಯರಿಂಗ್, ಎಂಸಿಎ ಅಥವಾ ಸಿಎ ಓದಿರುವ ಅಭ್ಯರ್ಥಿಗಳಿಗೆ ಇದೊಂದು ಸುವರ್ಣಾವಕಾಶ. ದೇಶದಾದ್ಯಂತ ನಿಯೋಜನೆಗೊಳ್ಳುವ ಈ ಹುದ್ದೆಗಳು ನಿಮ್ಮ ವೃತ್ತಿಜೀವನಕ್ಕೆ ಭದ್ರ ಬುನಾದಿ ಒದಗಿಸಲಿವೆ. ಖಾಲಿ ಇರುವ ಹುದ್ದೆಗಳ ವಿಭಾಗವಾರು ವಿವರ, ವಯೋಮಿತಿ, ಆಯ್ಕೆ ಪ್ರಕ್ರಿಯೆ ಹಾಗೂ ಅರ್ಜಿ ಸಲ್ಲಿಸುವ ಸಂಪೂರ್ಣ ವಿಧಾನವನ್ನು ಇಲ್ಲಿ ಸರಳವಾಗಿ ವಿವರಿಸಲಾಗಿದೆ.
ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ
ಬ್ಯಾಂಕ್ ಆಫ್ ಬರೋಡಾ ನೇಮಕಾತಿ ಮುಖ್ಯಾಂಶಗಳು
ನೇಮಕಾತಿ ಸಂಸ್ಥೆ: ಬ್ಯಾಂಕ್ ಆಫ್ ಬರೋಡಾ
ಅಧಿಸೂಚನೆ ಸಂಖ್ಯೆ: BOB/HRM/REC/ADVT/2026/15
ಹುದ್ದೆಯ ಹೆಸರು: ಮ್ಯಾನೇಜರ್, ಟೆಕ್ನಿಕಲ್ ಆಫೀಸರ್, ಚೀಫ್ ಮ್ಯಾನೇಜರ್
ಒಟ್ಟು ಹುದ್ದೆಗಳು: 206
ಅರ್ಜಿ ಸಲ್ಲಿಕೆ ಆರಂಭ: 06 ಆಗಸ್ಟ್ 2026
ಕೊನೆಯ ದಿನಾಂಕ: 26 ಆಗಸ್ಟ್ 2026
ಉದ್ಯೋಗದ ಸ್ಥಳ: ಭಾರತದಾದ್ಯಂತ
bankofbaroda.bank.in
ವಿಭಾಗವಾರು ಖಾಲಿ ಹುದ್ದೆಗಳು ಹಾಗೂ ಶೈಕ್ಷಣಿಕ ಅರ್ಹತೆ
ಬ್ಯಾಂಕ್ ಆಫ್ ಬರೋಡಾ ಒಟ್ಟು 206 ಹುದ್ದೆಗಳನ್ನು ವಿವಿಧ ಪ್ರಮುಖ ಇಲಾಖೆಗಳ ಅಗತ್ಯಕ್ಕೆ ತಕ್ಕಂತೆ ವಿಂಗಡಿಸಿದೆ. ಅದರ ಸಂಪೂರ್ಣ ವಿವರ ಹೀಗಿದೆ:
1 ಡಿಜಿಟಲ್ ಬ್ಯಾಂಕಿಂಗ್ ವಿಭಾಗ (19 ಹುದ್ದೆಗಳು)
ಮ್ಯಾನೇಜರ್ (ಡಿಜಿಟಲ್ ಪ್ರಾಡಕ್ಟ್): 13 ಹುದ್ದೆಗಳಿವೆ. ಐಟಿ, ಸಿಎಸ್ ಅಥವಾ ಇಸಿಇ ವಿಭಾಗದಲ್ಲಿ ಬಿ.ಇ ಅಥವಾ ಬಿ.ಟೆಕ್
ಪದವಿ ಜೊತೆಗೆ 3 ವರ್ಷಗಳ ಅನುಭವವಿರಬೇಕು.
ಸೀನಿಯರ್ ಮ್ಯಾನೇಜರ್: 1 ಹುದ್ದೆ ಖಾಲಿ ಇದ್ದು, ಬಿ.ಇ, ಬಿ.ಟೆಕ್ ಅಥವಾ ಎಂಸಿಎ ಜೊತೆಗೆ 6 ವರ್ಷಗಳ ಕೆಲಸದ ಅನುಭವ ಕೇಳಲಾಗಿದೆ.
ಪ್ರಾಡಕ್ಟ್ ಮ್ಯಾನೇಜರ್: 5 ಹುದ್ದೆಗಳಿದ್ದು, ಯಾವುದೇ ಪದವಿ ಹಾಗೂ 3 ವರ್ಷಗಳ ಡಿಜಿಟಲ್ ಲೆಂಡಿಂಗ್ ಅನುಭವವಿದ್ದರೆ ಸಾಕು.

2 ಫೆಸಿಲಿಟಿ ಮ್ಯಾನೇಜ್‌ಮೆಂಟ್ ವಿಭಾಗ (88 ಹುದ್ದೆಗಳು)
ಟೆಕ್ನಿಕಲ್ ಆಫೀಸರ್: 50 ಹುದ್ದೆಗಳಿಗೆ ಸಿವಿಲ್ ಅಥವಾ ಎಲೆಕ್ಟಿಕಲ್ ವಿಭಾಗದ ಬಿ.ಇ/ಬಿ.ಟೆಕ್ ಪದವೀಧರರು ಅರ್ಜಿ ಹಾಕಬಹುದು. ಕನಿಷ್ಠ 2 ವರ್ಷ ಅನುಭವ ಕಡ್ಡಾಯ.
ಟೆಕ್ನಿಕಲ್ ಮ್ಯಾನೇಜರ್: 30 ಹುದ್ದೆಗಳಿವೆ. 4 ವರ್ಷಗಳ ಅನುಭವದೊಂದಿಗೆ ಸಂಬಂಧಪಟ್ಟ ವಿಭಾಗದಲ್ಲಿ ಇಂಜಿನಿಯರಿಂಗ್ ಮುಗಿಸಿರಬೇಕು.
ಸೀನಿಯರ್ ಟೆಕ್ನಿಕಲ್ ಮ್ಯಾನೇಜರ್: 8 ಹುದ್ದೆಗಳಿದ್ದು, 7 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಬಿ.ಇ/ಬಿ.ಟೆಕ್ ಪದವೀಧರರು ಅರ್ಜಿ ಸಲ್ಲಿಸಬಹುದು.
3 ಇನ್ಸಾರ್ಮೇಷನ್ ಸೆಕ್ಯುರಿಟಿ ವಿಭಾಗ (16 ಹುದ್ದೆಗಳು)
ಮ್ಯಾನೇಜರ್ ಹಾಗೂ ಸೀನಿಯರ್ ಮ್ಯಾನೇಜರ್ ಹುದ್ದೆಗಳಿಗೆ ಸೈಬರ್ ಸೆಕ್ಯುರಿಟಿಯಲ್ಲಿ ಬಿ.ಇ/ಬಿ.ಟೆಕ್/ಎಂಸಿಎ/ಎಂ.ಟೆಕ್ ಜೊತೆಗೆ ಕಡ್ಡಾಯ ಪ್ರಮಾಣಪತ್ರಗಳನ್ನು ಹೊಂದಿರಬೇಕು.
4 ಸೆಕ್ಯುರಿಟಿ ವಿಭಾಗ (54 ಹುದ್ದೆಗಳು)
ಯಾವುದೇ ಪದವಿ ಪಡೆದ, ಭಾರತೀಯ ಸೇನೆ, ನೌಕಾಪಡೆ, ವಾಯುಪಡೆಯಲ್ಲಿ ಕನಿಷ್ಠ 5 ವರ್ಷ ಸೇವೆ ಸಲ್ಲಿಸಿದವರು ಅಥವಾ ಪೊಲೀಸ್/ಪ್ಯಾರಾಮಿಲಿಟರಿಯಲ್ಲಿ ಶ್ರೇಣಿ-1 ಅಧಿಕಾರಿಯಾಗಿ ಕೆಲಸ ಮಾಡಿದವರಿಗೆ ಮಾತ್ರ ಇಲ್ಲಿ ಅವಕಾಶವಿದೆ.
5 ಎಂಟರ್‌ಪ್ರೈಸ್ ಡೇಟಾ ಮ್ಯಾನೇಜ್‌ಮೆಂಟ್ (14 ಹುದ್ದೆಗಳು)
ಡೇಟಾ ಸೈಂಟಿಸ್ಟ್, ಡೇಟಾ ಪ್ರೊಫೈಲಿಂಗ್ ಸೇರಿದಂತೆ ಹಲವು ಹುದ್ದೆಗಳಿದ್ದು, ತಾಂತ್ರಿಕ ಅನುಭವದೊಂದಿಗೆ ಬಿ.ಇ, ಬಿ.ಟೆಕ್, ಬಿಎಸ್ಸಿ, ಎಂಎಸ್ಸಿ ಅಥವಾ ಎಂಸಿಎ ಓದಿದವರು ಅರ್ಜಿ ಸಲ್ಲಿಸಬಹುದು.
6 ಕಾರ್ಪೊರೇಟ್ ಅಕೌಂಟ್ಸ್ & ಟ್ಯಾಕ್ಷೇಷನ್ (15 ಹುದ್ದೆಗಳು)
ಮ್ಯಾನೇಜರ್ ಹಾಗೂ ಸೀನಿಯರ್ ಮ್ಯಾನೇಜರ್ ಹುದ್ದೆಗಳಿಗೆ ಸಿಎ, ಐಸಿಡಬ್ಲ್ಯುಎ ಅಥವಾ ಎಂಬಿಎ ಪದವಿ ಪೂರ್ಣಗೊಳಿಸಿರಬೇಕು. ಇನ್ವೆಸ್ಟರ್ ರಿಲೇಶನ್ಸ್ ವಿಭಾಗದಲ್ಲಿ 1 ಚೀಫ್ ಮ್ಯಾನೇಜರ್ ಹುದ್ದೆ ಖಾಲಿ ಇದೆ.
ವಯೋಮಿತಿ ಹಾಗೂ ಸಡಿಲಿಕೆ
ಅಭ್ಯರ್ಥಿಗಳ ವಯಸ್ಸನ್ನು ಆಗಸ್ಟ್ 1, 2026ಕ್ಕೆ ಅನ್ವಯವಾಗುವಂತೆ ಲೆಕ್ಕಹಾಕಲಾಗುತ್ತದೆ. ಹುದ್ದೆಗಳ ಶ್ರೇಣಿಗೆ ಅನುಗುಣವಾಗಿ ವಯೋಮಿತಿಯನ್ನು ಈ ಕೆಳಗಿನಂತೆ ನಿರ್ಧರಿಸಲಾಗಿದೆ:
JMG/S-I ಹುದ್ದೆಗಳಿಗೆ: ಕನಿಷ್ಠ 23 ವರ್ಷ, ಗರಿಷ್ಠ 35 ವರ್ಷ.
MMG/S-II ಹುದ್ದೆಗಳಿಗೆ: ಕನಿಷ್ಠ 24-25 ವರ್ಷ, ಗರಿಷ್ಠ 35-37 .
MMG/S-III ಹುದ್ದೆಗಳಿಗೆ: ಕನಿಷ್ಠ 27-28 ವರ್ಷ, ಗರಿಷ್ಠ 39-40 ವರ್ಷ.
SMG/S-IV ಹುದ್ದೆಗಳಿಗೆ: ಕನಿಷ್ಠ 28-31 ವರ್ಷ, ಗರಿಷ್ಠ 40-43 .
ಸರ್ಕಾರಿ ನಿಯಮಗಳ ಪ್ರಕಾರ ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ, ಒಬಿಸಿ (NCL) ಅಭ್ಯರ್ಥಿಗಳಿಗೆ 3 ವರ್ಷ ಹಾಗೂ ವಿಕಲಚೇತನರಿಗೆ 10 ರಿಂದ 15 ವರ್ಷಗಳವರೆಗೆ ಗರಿಷ್ಠ ವಯೋಮಿತಿಯಲ್ಲಿ ಸಡಿಲಿಕೆ ಲಭ್ಯವಿದೆ. ಮಾಜಿ ಸೈನಿಕರಿಗೂ ನಿಯಮಾನುಸಾರ ವಿನಾಯಿತಿ ಇರಲಿದೆ.
ವೇತನ ಶ್ರೇಣಿ
ಬ್ಯಾಂಕಿಂಗ್ ನಿಯಮಾವಳಿಗಳ ಪ್ರಕಾರ ಆಯ್ಕೆಯಾದ ಅಧಿಕಾರಿಗಳಿಗೆ ಆಕರ್ಷಕ ವೇತನ ಹಾಗೂ ಇತರ ಸೌಲಭ್ಯಗಳು ಸಿಗಲಿವೆ.
JMG/S-1: 48,480 ໙. ໖໐໖ 85,920 .
MMG/S-II: 64,820 ໙. ໖໖ 93,960 .
MMG/S-III: 85,920 ໙. ໖໐໖ 1,05,280 .
SMG/S-IV: 1,02,300 . ໖໖ 1,20,940 .
ಆಯ್ಕೆ ಪ್ರಕ್ರಿಯೆ ಮತ್ತು ಪರೀಕ್ಷಾ ಮಾದರಿ
ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಮೊದಲು ಶಾರ್ಟ್‌ಲಿಸ್ಟ್ ಮಾಡಿ ಮುಂದಿನ ಹಂತಕ್ಕೆ ಕರೆಯಲಾಗುತ್ತದೆ. ಆಯ್ಕೆ ಪ್ರಕ್ರಿಯೆಯು ಆನ್‌ಲೈನ್ ಲಿಖಿತ ಪರೀಕ್ಷೆ, ಸೈಕೋಮೆಟ್ರಿಕ್ ಪರೀಕ್ಷೆ, ಗುಂಪು ಚರ್ಚೆ (GD) ಮತ್ತು ನೇರ ಸಂದರ್ಶನವನ್ನು (Interview) ಒಳಗೊಂಡಿರುತ್ತದೆ.
ಆನ್‌ಲೈನ್ ಪರೀಕ್ಷೆಯಲ್ಲಿ ಒಟ್ಟು 150 ಪ್ರಶ್ನೆಗಳಿರುತ್ತವೆ. 225 ಅಂಕಗಳ ಈ ಪರೀಕ್ಷೆಗೆ 150 ನಿಮಿಷಗಳ ಕಾಲಾವಕಾಶ ನೀಡಲಾಗುತ್ತದೆ. ರೀಸನಿಂಗ್, ಇಂಗ್ಲಿಷ್, ಕ್ವಾಂಟಿಟೇಟಿವ್ ಆಪ್ಟಿಟ್ಯೂಡ್ ಹಾಗೂ ವೃತ್ತಿಪರ ಜ್ಞಾನಕ್ಕೆ ಸಂಬಂಧಿಸಿದ ಪ್ರಶ್ನೆಗಳಿರುತ್ತವೆ. ಗಮನಿಸಿ, ಪ್ರತಿ ತಪ್ಪು ಉತ್ತರಕ್ಕೆ 0.25 ಅಂಕಗಳನ್ನು ಕಡಿತಗೊಳಿಸುವ ಋಣಾತ್ಮಕ ಮೌಲ್ಯಮಾಪನ ಪದ್ಧತಿ ಜಾರಿಯಲ್ಲಿದೆ.
ಅರ್ಜಿ ಶುಲ್ಕದ ವಿವರ
ಸಾಮಾನ್ಯ ವರ್ಗ, ಒಬಿಸಿ ಹಾಗೂ ಆರ್ಥಿಕವಾಗಿ ಹಿಂದುಳಿದ (EWS) ಅಭ್ಯರ್ಥಿಗಳು: 850 ರೂ.
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ವಿಕಲಚೇತನರು ಹಾಗೂ ಮಹಿಳಾ ಅಭ್ಯರ್ಥಿಗಳಿಗೆ: 175 ರೂ.
ಈ ಶುಲ್ಕವನ್ನು ಆನ್‌ಲೈನ್ ಬ್ಯಾಂಕಿಂಗ್, ಯುಪಿಐ ಅಥವಾ ಡೆಬಿಟ್/ಕ್ರೆಡಿಟ್ ಕಾರ್ಡ್ ಬಳಸಿ ಸುಲಭವಾಗಿ ಪಾವತಿಸಬಹುದು.
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವುದು ಹೇಗೆ?
1. ಮೊದಲಿಗೆ ಬ್ಯಾಂಕ್ ಆಫ್ ಬರೋಡಾದ ಅಧಿಕೃತ ដ칩 bankofbaroda.bank.in A ໖໖.
2. ಮುಖಪುಟದಲ್ಲಿರುವ ‘Careers’ ವಿಭಾಗದ ಮೇಲೆ 옵 , ‘Current Opportunities’ ಮಾಡಿಕೊಳ್ಳಿ.
3. ನೇಮಕಾತಿ ಲಿಂಕ್ ತೆರೆದು, ಆನ್‌ಲೈನ್ ಅರ್ಜಿಯಲ್ಲಿ ಕೇಳಲಾದ ನಿಮ್ಮ ಎಲ್ಲಾ ವೈಯಕ್ತಿಕ ಹಾಗೂ ಶೈಕ್ಷಣಿಕ ವಿವರಗಳನ್ನು ಜಾಗರೂಕತೆಯಿಂದ ಭರ್ತಿ ಮಾಡಿ.
4. ನಿಮ್ಮ ರೆಸ್ಟೋಮ್, ಫೋಟೋ, ಸಹಿ ಹಾಗೂ ಅಗತ್ಯ ಪ್ರಮಾಣಪತ್ರಗಳನ್ನು ನಿಗದಿತ ಅಳತೆಯಲ್ಲಿ ತಪ್ಪದೇ ಅಪ್‌ಲೋಡ್ ಮಾಡಿ.
ಬ್ಯಾಂಕ್ ಆಫ್ ಬರೋಡಾ ನೇಮಕಾತಿ ಅಧಿಸೂಚನೆಯು ಉದ್ಯೋಗದ ನಿರೀಕ್ಷೆಯಲ್ಲಿರುವ ಯುವಕ ಯುವತಿಯರಿಗೆ ದೊಡ್ಡ ಭರವಸೆ ಮೂಡಿಸಿದೆ. ಉತ್ತಮ ವೇತನ, ಉದ್ಯೋಗ ಭದ್ರತೆ ಹಾಗೂ ವೃತ್ತಿಜೀವನದಲ್ಲಿ ಬೆಳೆಯಲು ವಿಫುಲ ಅವಕಾಶಗಳನ್ನು ಒದಗಿಸುವ ಈ ಬ್ಯಾಂಕ್ ಹುದ್ದೆಗಳಿಗೆ ಕೊನೆಯ ದಿನಾಂಕದವರೆಗೆ ಕಾಯದೆ ತಕ್ಷಣವೇ ಅರ್ಜಿ ಸಲ್ಲಿಸುವುದು ಉತ್ತಮ.
ರಾಷ್ಟ್ರಮಟ್ಟದ ಪರೀಕ್ಷೆಯಾಗಿರುವುದರಿಂದ ಸ್ಪರ್ಧೆ ತುಸು ಹೆಚ್ಚೇ ಇರುತ್ತದೆ. ಹೀಗಾಗಿ ಈಗಿನಿಂದಲೇ ಲಿಖಿತ ಪರೀಕ್ಷೆ ಹಾಗೂ ಸಂದರ್ಶನಕ್ಕೆ ವ್ಯವಸ್ಥಿತವಾಗಿ ತಯಾರಿ ಆರಂಭಿಸಿ. KPSCVaani ವೆಬ್‌ಸೈಟ್‌ಗೆ ನಿರಂತರವಾಗಿ ಭೇಟಿ ನೀಡುವ ಮೂಲಕ ಪರೀಕ್ಷಾ ದಿನಾಂಕದ ಕುರಿತಾದ ಅಪ್ಲೇಟ್‌ಗಳನ್ನು ಪಡೆದುಕೊಳ್ಳಿ. ಬ್ಯಾಂಕಿಂಗ್ ಕ್ಷೇತ್ರದಲ್ಲಿ ನಿಮ್ಮ ಕನಸಿನ ಉದ್ಯೋಗ ನಿಮ್ಮದಾಗಲಿ.
No. of posts: 206